ಭಕ್ತಾಧಿಗಳು ಪಾಲಿಸಬೇಕಾದದ್ದು

1. ಪ್ರದಕ್ಷಿಣೆ ಪಥದಲ್ಲಿ ಸಾಷ್ಟಾಂಗ ನಮಸ್ಕಾರ ಮಾಡುವವರು ಇತರೆ ಭಕ್ತಾದಿಗಳ ಪ್ರದಕ್ಷಿಣೆಗೆ ತೊಂದರೆಯಾಗದಂತೆ ನಮಸ್ಕರಿಸಬೇಕು.

2. ಮಹಿಳೆಯರು ಹೆರಿಗೆ ಸೂತಕ ಇದ್ದಲ್ಲಿ ದೇವಸ್ಥಾನಕ್ಕೆ ಪ್ರವೇಶಿಸಬಾರದು.

3. ಮರಣ ಸೂತಕ ಇದ್ದಲ್ಲಿ ಕುಟುಂಬದವರು ದೇವಸ್ಥಾನದ ಅಂಗಳಕ್ಕೆ ಪ್ರವೇಶಿಸಬಾರದು.

4. ಭಕ್ತಾದಿಗಳು ಅವರ ಸಂಸಾರದಲ್ಲಿ ಸತ್ತುಹೋದರೆ ಅಂತವರು 11 ದಿನ ದೇವಸ್ಥಾನಕ್ಕೆ ಬರಬಾರದು.

5. ಹೆಂಗಸರು ತಿಂಗಳ ಸೂತಕ ಇದ್ದಲ್ಲಿ (5 ದಿನ) ದೇವಾಲಯದ ಒಳಗೆ ಪ್ರವೇಶಿಸಬಾರದು.

6. 7 ತಿಂಗಳು ದಾಟಿದ ಗರ್ಭಿಣಿ ಸ್ತ್ರೀಯರು ಒಳಗಿನ ಅಂಗಳಕ್ಕೆ ಪ್ರವೇಶಿಸಬಾರದು.

7. ದೇವಸ್ಥಾನದ ಆವರಣದಲ್ಲಿ ಮದ್ಯಪಾನ ಧೂಮ ಪಾನ ಮಾಡುವುದು ಮತ್ತು ಉಗುಳುವಿಕೆಯನ್ನು ನಿಷೇಧಿಸಲಾಗಿದೆ. ಮತ್ತು ಮದ್ಯಪಾನ ಮಾಡಿ ದೇವಸ್ಥಾನವನ್ನು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.

9. ಭಕ್ತಾದಿಗಳು ದೇವಸ್ಥಾನದ ಆವರಣಕ್ಕೆ ಬರಿ ಕಾಲಿನಲ್ಲಿ ಬರತಕ್ಕದ್ದು.

10. ರಕ್ತಸ್ರಾವ ಗಾಯಗಳಿಂದ ಬಳಲುತ್ತಿರುವವರು, ಸಾಂಕ್ರಾಮಿಕ ರೋಗಿಗಳು ಒಳಗೆ ಪ್ರವೇಶಿಸಬಾರದು.

11. ದೇವಸ್ಥಾನದ ಆವರಣದಲ್ಲಿ ಫೋಟೊ ತೆಗೆಯುವುದನ್ನು ನಷೇದಿಸಲಾಗಿದೆ.

12. ಯಾವುದೇ ಸೇವೆಯನ್ನು ಮಾಡಿಸುವವರು ಸೇವಾ ಕೌಂಟರ್ ನಲ್ಲಿ ರಶೀದಿ ಪಡೆಯತಕ್ಕದ್ದು.

13. ಕಾಣಿಕೆಯನ್ನು ಹುಂಡಿಯಲ್ಲೇ ಹಾಕುವುದು.. ಅಥವಾ ಕೌಂಟರ್ ನಲ್ಲಿ ರಶೀದಿ ಪಡೆಯತಕ್ಕದ್ದು.

14. ದೇವಸ್ಥಾನದ ಪರಿಸರವನ್ನು ಶುಚಿಯಾಗಿಡಲು ಸಹಕರಿಸಿ ದೇವಾಲಯದ ಪಾವಿತ್ರ್ಯತೆಯನ್ನು ಕಾಪಾಡತಕ್ಕದ್ದು.

15. ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ತಮ್ಮ ದೇಣಿಗೆಯನ್ನು ಚೆಕ್, ಡಿಡಿ ಅಥವಾ ನಗದು ಮೂಲಕ ಸಲ್ಲಿಸಬಹುದು. ದೇವಸ್ಥಾನದ ಬ್ಯಾಂಕ್ ಖಾತೆಯ ವಿವರ: ಬ್ಯಾಂಕ್ ನಿ., Perdoor, ಉಡುಪಿ-576103, ಬ್ಯಾಂಕ್ ಖಾತೆ ಸಂ: 00000000101 IFSC Code: 00000111